India AI Impact Summit 2026 : ಪ್ರಧಾನಿ ಮೋದಿಯಿಂದ 'MANAV' ವಿಷನ್ ಅನಾವರಣ!

India AI Impact Summit 2026
India AI Impact Summit 2026
Published on

ನವದೆಹಲಿ:ಆರ್ಟಿಫಿಶಿಯಲ್ಇಂಟೆಲಿಜೆನ್ಸ್ (AI) ಕೇವಲ ಯಂತ್ರ ಕೇಂದ್ರಿತವಾಗದೆ ಮಾನವ ಕಲ್ಯಾಣಕ್ಕಾಗಿ ಬಳಕೆಯಾಗಬೇಕು ಎಂದು ಕರೆನೀಡಿದ ಪ್ರಧಾನಿ ಮೋದಿ, "MANAV" ಎಂಬ ಪಂಚಸೂತ್ರಗಳನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ.

ನವದೆಹಲಿಯಲ್ಲಿಗುರುವಾರ ನಡೆದ 'ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026'(India AI Impact Summit 2026 ) ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರುಕೃತಕ ಬುದ್ಧಿಮತ್ತೆ (AI) ಕುರಿತಾದ ಭಾರತದ ದೂರದೃಷ್ಟಿಯಾದ "ಮಾನವ್" (MANAV) ವಿಷನ್ಅನ್ನು ಅನಾವರಣಗೊಳಿಸಿದ್ದಾರೆ.

21ನೇ ಶತಮಾನದಎಐ ಆಧಾರಿತ ಜಗತ್ತಿನಲ್ಲಿ ಮಾನವೀಯತೆಯ ಕಲ್ಯಾಣಕ್ಕಾಗಿ ಈ ವಿಷನ್ ಮಹತ್ವದ ಕೊಂಡಿಯಾಗಲಿದೆ ಎಂದು ಅವರುಪ್ರತಿಪಾದಿಸಿದರು.

ಏನಿದು"MANAV" ವಿಷನ್?

ಪ್ರಧಾನಿಯವರುವಿವರಿಸಿದಂತೆ 'MANAV' ಎಂದರೆ:

M(Moral and Ethical systems):ಎಐ ನೈತಿಕ ಮಾರ್ಗದರ್ಶನದ ಮೇಲೆ ಆಧಾರಿತವಾಗಿರಬೇಕು.

A(Accountable governance):ಪಾರದರ್ಶಕ ನಿಯಮಗಳು ಮತ್ತು ಬಲವಾದ ಮೇಲ್ವಿಚಾರಣೆ ಇರಬೇಕು.

N(National sovereignty):ರಾಷ್ಟ್ರೀಯ ಸಾರ್ವಭೌಮತ್ವ - ಯಾರ ಡೇಟಾ ಅವರಿಗೆ ಸೇರಿದ್ದು ಎಂಬ ಹಕ್ಕು.

A(Accessible and inclusive):ಎಐ ಎಲ್ಲರಿಗೂ ಲಭ್ಯವಿರಬೇಕು, ಅದು ಯಾರದೋ ಒಬ್ಬರ ಏಕಸ್ವಾಮ್ಯವಾಗಬಾರದು.

V(Valid and legitimate):ಎಐ ಕಾನೂನುಬದ್ಧವಾಗಿರಬೇಕು ಮತ್ತು ಅದರ ಫಲಿತಾಂಶಗಳನ್ನು ಪರಿಶೀಲಿಸುವಂತಿರಬೇಕು ಎಂದರು.

ಪ್ರಮುಖ ಮುಖ್ಯಾಂಶಗಳು

ದಾರಿ ತೋರಿಸುವಜಿಪಿಎಸ್ (GPS): ಎಐ ಕಾರ್ಯನಿರ್ವಹಣೆಯನ್ನುಜಿಪಿಎಸ್ ಗೆ ಹೋಲಿಸಿದ ಮೋದಿ, "ಜಿಪಿಎಸ್ ನಮಗೆ ದಾರಿ ತೋರಿಸುತ್ತದೆ, ಆದರೆ ಯಾವ ದಿಕ್ಕಿಗೆಹೋಗಬೇಕು ಎಂಬ ಅಂತಿಮ ತೀರ್ಮಾನ ನಮ್ಮದೇ ಆಗಿರಬೇಕು" ಎಂದು ಎಐ ಮೇಲಿನ ಮಾನವ ನಿಯಂತ್ರಣದ ಅಗತ್ಯವನ್ನುಒತ್ತಿಹೇಳಿದರು.

ಡಿಜಿಟಲ್ಅಥೆಂಟಿಸಿಟಿ (Authenticity Labels):ಡೀಪ್‌ಫೇಕ್ ಮತ್ತು ನಕಲಿ ವಿಷಯಗಳ ಬಗ್ಗೆ ಎಚ್ಚರಿಸಿದ ಅವರು, ಎಐ ಸೃಷ್ಟಿಸಿದ ಪಠ್ಯ, ಚಿತ್ರ ಮತ್ತುವೀಡಿಯೊಗಳಿಗೆ ವಾಟರ್‌ಮಾರ್ಕ್ ಅಥವಾ 'ಅಥೆಂಟಿಸಿಟಿ ಲೇಬಲ್' ಇರಬೇಕು ಎಂದು ಪ್ರತಿಪಾದಿಸಿದರು.

ಡೇಟಾ ಪಾಯಿಂಟ್‌ಗಳಲ್ಲ: ಎಐ ಪಾಲಿಗೆ ಮಾನವರು ಕೇವಲ 'ಡೇಟಾ ಪಾಯಿಂಟ್‌'ಗಳಾಗಬಾರದು.ಎಐ ತಂತ್ರಜ್ಞಾನವು ಎಲ್ಲರನ್ನೂ ಒಳಗೊಳ್ಳುವ ಮತ್ತು ಸಬಲೀಕರಣದ ಸಾಧನವಾಗಬೇಕು.

ಜಾಗತಿಕ ಸಹಕಾರ: ಎಐ ಅನ್ನು ಜಾಗತಿಕ ಸಾರ್ವಜನಿಕ ಒಳಿತಿಗಾಗಿಅಭಿವೃದ್ಧಿಪಡಿಸಲು ಮತ್ತು ಜಾಗತಿಕ ಮಾನದಂಡಗಳನ್ನು ಸ್ಥಾಪಿಸಲು ಅವರು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net